ಅಭಿಪ್ರಾಯ / ಸಲಹೆಗಳು

ರೈಲ್ವೇ ಪೊಲೀಸ್ ಬಗ್ಗೆ

ಪರಿಚಯ :

          ಕರ್ನಾಟಕ ರೈಲ್ವೇ ಪೊಲೀಸ್ ಘಟಕವನ್ನು 1887 ರಲ್ಲಿ ಸ್ಥಾಪಿಸಲಾಯಿತು. ರೈಲ್ವೇ ಪೊಲೀಸ್ ಘಟಕವು ಕರ್ನಾಟಕ ರಾಜ್ಯ ಪೊಲೀಸ್ ನ ಒಂದು ಭಾಗವಾಗಿದ್ದು ಕರ್ನಾಟಕದ ಸಂಪೂರ್ಣ ರೈಲ್ವೇ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 3089 ಕಿ.ಮೀ ರೈಲ್ವೇ ಹಳಿ ವ್ಯಾಪ್ತಿ ಹೊಂದಿರುತ್ತದೆ. ರೈಲ್ವೇ ಪೊಲೀಸ್ ಘಟಕವು ಜನರಲ್ ಮ್ಯಾನೇಜರ್, ನೈರುತ್ಯ ರೈಲ್ವೇ, ಹುಬ್ಬಳ್ಳಿ, ದಕ್ಷಿಣ ಕೇಂದ್ರ ರೈಲ್ವೇ, ಸಿಕಿಂದ್ರಾಬಾದ್, ಕೇಂದ್ರ ರೈಲ್ವೇ, ಮುಂಬೈ, ದಕ್ಷಿಣ ರೈಲ್ವೇ, ಚೆನ್ನೈ ಮತ್ತು ರೈಲ್ವೇ ಮಂಡಳಿ, ನವದೆಹಲಿ  ಯೊಂದಿಗೆ ಸಂಪರ್ಕ ಹೊಂದಿರುತ್ತದೆ.

 

          ಕರ್ನಾಟಕ ರೈಲ್ವೇ ಪೊಲೀಸ್ ಘಟಕವು ಕರ್ನಾಟಕ ರಾಜ್ಯ ಪೊಲೀಸ್ ನ ಒಂದು ಭಾಗವಾಗಿದ್ದು, ಇದನ್ನು ಸರ್ಕಾರಿ ರೈಲ್ವೇ ಪೊಲೀಸ್ ಜಿಲ್ಲೆ ಎಂದು ಕರೆಯಲಾಗುತ್ತಿದೆ. ಇದು ಕರ್ನಾಟಕ ರಾಜ್ಯಾದ್ಯಂತ  ಹರಡಿರುವ ರೈಲ್ವೇ ವ್ಯಾಪ್ತಿಯನ್ನು ಇತರೆ ಜಿಲ್ಲೆಗಳಂತೆ ರೈಲ್ವೇ ಪೊಲೀಸ್ ಜಿಲ್ಲಾ ವ್ಯಾಪ್ತಿಯೆಂದು ಪರಿಗಣಿಸಲಾಗಿದೆ.

 

          ರೈಲ್ವೇ ಪೊಲೀಸ್ ಘಟಕವು ಒಂದು ಪೊಲೀಸ್ ಅಧೀಕ್ಷಕರವರ ಕಛೇರಿ (ಜಿಲ್ಲಾ ಪೊಲೀಸ್ ಕಛೇರಿ),  ಎರಡು ಪೊಲೀಸ್ ಉಪ ವಿಭಾಗಳು, ನಾಲ್ಕು ವೃತ್ತ ನಿರೀಕ್ಷಕರ ಕಛೇರಿಗಳು, 18 ರೈಲ್ವೇ ಪೊಲೀಸ್ ಠಾಣೆಗಳು ಮತ್ತು 25 ರೈಲ್ವೇ ಪೊಲೀಸ್ ಹೊರ ಠಾಣೆಗಳನ್ನು ಹೊಂದಿರುತ್ತದೆ. ಈ ಸಂಪೂರ್ಣ ರೈಲ್ವೇ ಘಟಕವನ್ನು ಬೆಂಗಳೂರು ಕೇಂದ್ರ ಸ್ಥಾನದಲ್ಲಿರುವ ಪೊಲೀಸ್ ಮಹಾನಿರೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ರೈಲ್ವೇಸ್ ರವರು ಉಸ್ತುವಾರಿ ವಹಿಸಿರುತ್ತಾರೆ.

 

          ರೈಲ್ವೇ ಪೊಲೀಸ್ ಘಟಕವು ರೈಲ್ವೇ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಅಪರಾದ ಪತ್ತೆ ಕಾರ್ಯದೊಂದಿಗೆ ರೈಲ್ವೇ ಪ್ರಯಾಣಿಕರ ಮತ್ತು ಸಾರ್ವಜನಿಕರ  ರಕ್ಷಣಾ ಜವಾಬ್ದಾರಿನ್ನು ನಿಭಾಯಿಸುತ್ತಿರುತ್ತದೆ.

ಇತ್ತೀಚಿನ ನವೀಕರಣ​ : 25-02-2023 03:13 PM ಅನುಮೋದಕರು: DSP


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರೈಲ್ವೇ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080