ಅಭಿಪ್ರಾಯ / ಸಲಹೆಗಳು

ವೈಯಕ್ತಿಕ ಸುರಕ್ಷತೆ

ವೈಯಕ್ತಿಕ ಸುರಕ್ಷತೆ

ದಾರಿಯಲ್ಲಿ ಸುರಕ್ಷತೆಗೆ  ಸಂಬಂಧಿಸಿದಂತೆ, ಸಾಮಾನ್ಯ ಅಂಶಗಳು

 

·         ನೀವು ರಸ್ತೆಯಲ್ಲಿರುವಾಗ, ಆಫೀಸಿನ ಕಟ್ಟದಲ್ಲಿದ್ದಾಗ, ಶಾಪಿಂಗ್ ಮಾಲ್ ನಲ್ಲಿದ್ದಾಗ, ವಾಹನ ಚಲಾಯಿಸುವಾಗ, ಬಸ್ ಗಾಗಿ ಕಾಯುತ್ತಿರುವಾಗ ನಿಮ್ಮ ಸುತ್ತಮುತ್ತ ಜಾಗೃತೆವಹಿಸುವುದು

·         ಸುತ್ತಮುತ್ತಲಿನಲ್ಲಿರುವವರಿಗೆ ನೀವು ಶಾಂತರಾಗಿರುವ, ವಿಶ್ವಾಸದಿಂದಿರುವ ಹಾಗೂ ನೀವು ಹೋಗುತ್ತಿರುವ ಜಾಗವು ನಿಮಗಾಗಲೆ ಪರಿಚಿತ ಇರುವ ರೀತಿಯಲ್ಲಿ ವರ್ತಿಸುವುದು.

·         ನಿಮ್ಮ ಪ್ರವೃತ್ತಿಯ ಮೇಲೆ ಭರವಸೆ ಇಡಿ, ಒಂದು ವೇಳೆ ನಿಮಗೆ ಯಾರಾದರು ಅನುಚಿತವಾಗಿ ವರ್ತಿಸಿದ್ದಲ್ಲಿ ಅಂತಹವರನ್ನು ದೂರವಿಡಿ.

·         ನೀವು ವಾಸಿಸುವ ಮತ್ತು ಕೆಲಸಮಾಡುವ ಸ್ಥಳಗಳ ನೆರೆಹೊರೆಯವರ ಬಗ್ಗೆ ತಿಳಿದುಕೊಳ್ಳಿ. ನಿಮಗೆ ಹತ್ತಿರದಲ್ಲಿರುವ ಪೊಲೀಸ್ ಠಾಣೆ, ಅಗ್ನಿಶಾಮಕ, ಸಾರ್ವಜನಿಕ ದೂರವಾಣಿ, ಆಸ್ಪತ್ರೆಗಳ ಬಗ್ಗೆ ತಿಳಿದುಕೊಳ್ಳಿ ಹಾಗೂ ಅವುಗಳಲ್ಲಿ ತಡ ರಾತ್ರಿಯವರೆಗೂ ತೆರೆದಿರುವ ಬಗ್ಗೆ ಮಾಹಿತಿಯನ್ನು ಸಂಗ್ರಿಹಿಸಿ ಇಟ್ಟುಕೊಳ್ಳುವುದು.

·         ರಸ್ತೆಯಲ್ಲಿ ನಡೆಯುವಾಗ ವಿಶ್ವಾಸದಿಂದ ತಲೆಯನ್ನು ಎತ್ತಿ ನಡೆಯುವುದು. ಕೈಗಳನ್ನು ಜೇಬುಗಳಲ್ಲಿ ಇಟ್ಟುಕೊಳ್ಳದೆ ಮುಕ್ತವಾಗಿ ನಡೆಯಿರಿ.

·         ಹೆಚ್ಚಾಗಿ ಸಾರ್ವಜನಿಕ ರಸ್ತೆಗಳನ್ನೇ ಉಪಯೋಗಿಸಿ, ಗಲ್ಲಿ ಅಥವಾ ಶಾರ್ಟ್ ಕಟ್ ರಸ್ತೆಗಳನ್ನು ಬಳಸಬೇಡಿ.

·         ನಿಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳಿ. ನಿರ್ಜನ ಪ್ರದೇಶಗಳನ್ನು ಆದಷ್ಟು ತಪ್ಪಿಸಿ.

·         ರಾತ್ರಿಯ ವೇಳೆಯಲ್ಲಿ ಆದಷ್ಟು ಬೆಳಕನ್ನು ಹೊಂದಿರುವ ಪ್ರದೇಶಗಳಲ್ಲಿ ಚಲಿಸಿ.

·         ಒಂದು ವೇಳೆ ನಿಮ್ಮನ್ನು ಯಾರಾದರೂ ಹಿಂಬಾಲಿಸುತ್ತಿರುವುದು ಕಂಡುಬಂದಲ್ಲಿ ನೀವು ಚಲಿಸುತ್ತಿರುವ  ರಸ್ತೆಯನ್ನು ಬದಲಿಸಿ.

·         ಒಂದು ವೇಳೆ ನಿಮಗೆ ಭಯಮೂಡಿದಲ್ಲಿ, ಆತಂಕಕ್ಕೆ ಒಳಗಾಗದೆ ನಿಮ್ಮ ಸುತ್ತಮುತ್ತಲಿನ ಪರಿಸ್ಥಿತಿಯ ಬಗ್ಗೆ ಅವಲೋಕಿಸಿ.

.            ಸಾರ್ವಜನಿಕ ಸಾರಿಗೆ ಹೆಚ್ಚು ಬೆಳಕನ್ನು ಹೊಂದಿರುವ, ಬಿಡುವಿಲ್ಲದ ನಿಲ್ದಾಣಗಳನ್ನು ಉಪಯೋಗಿಸಿ.

·            ನಿಮಗೆ ಯಾರಾದರು ಕಿರುಕುಳ ನೀಡಿದ್ದಲ್ಲಿ ಮುಜುಗರಕ್ಕೆ ಒಳಗಾಗದೆ, ನಿಮ್ಮ ಸುತ್ತಮುತ್ತಲಿನವರಿಂದ ಸಹಾಯ ಪಡೆಯಿರಿ

·            ಒಂದು ವೇಳೆ ನಿಮಗೆ ಅಹಿತಕರ ಎನಿಸಿದ್ದಲ್ಲಿ ಸಾರ್ವಜನಿಕರಿರುವ ಬೇರೆ ಸ್ಥಳಕ್ಕೆ ತಲುಪಿ.

ಪ್ರಯಾಣಕ್ಕಾಗಿ ಉಪಯುಕ್ತ ಮಾಹಿತಿ

·         ನೀವು ಪ್ರಯಾಣಿಸುತ್ತಿರುವ ಬಗ್ಗೆ ಮುಂಚಿತವಾಗಿ ನಿಮ್ಮ ಪ್ರಯಾಣದ ಯೋಜನೆಯನ್ನು ತಯಾರಿಸಿ, ಪ್ರಯಾಣಿಸುವ ಮಾರ್ಗ, ನೀವು ಹಿಂದಿರುಗುವ ಅಂದಾಜು ವೇಳೆ ಇತರ ಮಾಹಿತಿಯನ್ನು ನಿಮ್ಮ ನಂಬಿಕಸ್ತರಿಗೆ ತಿಳಿಸುವುದು ಬಹಳ ಉಪಯುಕ್ತವಾಗಿರುತ್ತದೆ.

·         ಹಿಂದಿರುಗಲು ಅವಶ್ಯಕವಾದ ಸಾಕಷ್ಟು ಹಣವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳುವುದು.

·         ಒಂದು ವೇಳೆ ಟಿಕೆಟ್ ಅಥವಾ ಹಣವನ್ನು ಕಳೆದುಕೊಂಡಲ್ಲಿ ವಾಹನದ ಚಾಲಕ/ಟಿಕೆಟ್ ಆಫೀಸರ್/ಸಿಬ್ಬಂಧಿ ರವರಿಗೆ ವಿವರಿಸುವುದು. ನಿಮ್ಮ ಪ್ರಾಮಾಣಿಕತೆಯನ್ನು ಸಾಬೀತು ಪಡಿಸಲು ನಿಮ್ಮೊಂದಿಗೆ ನಿಮ್ಮ ಗುರುತಿನ ಚೀಟಿಯನ್ನು ಕಡ್ಡಾವಾಗಿ ನಿಮ್ಮೊಂದಿಗೆ ಇಟ್ಟುಕೊಳ್ಳುವುದು.

·         ರಾತ್ರಿ ವೇಳೆಯಲ್ಲಿ ನಿಮಗೆ ಗೊತ್ತಿಲ್ಲದ ಸ್ಥಳಗಳಿಗೆ ಒಂಟಿಯಾಗಿ ಹೋಗಲು ಪ್ರೇರೇಪಿತರಾಗಬೇಡಿ.

ನಿಮ್ಮ ವಸ್ತುಗಳನ್ನು ಯಾರಾದರು ದೋಚಲು ಪ್ರಯತ್ನಿಸಿದ್ದಲ್ಲಿ

·         ತಕ್ಷಣ ಪೊಲೀಸರಿಗೆ ವರದಿಮಾಡಿ, ಹಾಗೂ ದರೋಡೆ ಮಾಡಲು ಬಂದಿದ್ದ ವ್ಯಕ್ತಿಯ ಬಗ್ಗೆ ವಿವರಿಸಿ. ಇದರಿಂದ ನಿಮ್ಮಂತೆಯೇ ಬೇರೊಬ್ಬರಿಗೆ  ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬಹುದಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-01-2020 12:40 PM ಅನುಮೋದಕರು: DSP


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರೈಲ್ವೇ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080