ಅಭಿಪ್ರಾಯ / ಸಲಹೆಗಳು

ಮಹಿಳೆಯರ ಹಕ್ಕುಗಳು

ಮಹಿಳೆಯರ ಹಕ್ಕುಗಳು

 

·         ಯಾವುದೇ ವ್ಯಕ್ತಿಯು ಒಬ್ಬ ಮಹಿಳೆಯ ಮೇಲೆ ದಾಳಿ ನಡೆಸಿದ್ದಲ್ಲಿ ಅಥವಾ ಮಹಿಳೆಯ ಮಾನಭಂಗ ಮಾಡುವ ಉದ್ದೇಶದಿಂದ ಅಥವಾ ಅದರಿಂದಾಗಿ ಅವಳ ಮಾನಭಂಗವಾಗುವ ಸಂಭವವಿದೆಯಂದು ತಿಳಿದೂ, ಅವಳ ಮೇಲೆ ಹಲ್ಲೆಮಾಡುವ ಅಥವಾ ಅಪರಾಧಿಕ ಬಲಪ್ರಯೋಗ ಮಾಡುವ ಯಾವುದೇ ವ್ಯಕ್ತಿಯ ಮೇಲೆ ದೂರು ನೀಡುವ ಅಧಿಕಾರವನ್ನು ಪ್ರತಿಯೊಬ್ಬ ಮಹಿಳೆ ಹೊಂದಿರುತ್ತಾಳೆ. [ಭಾರತೀಯ ದಂಡ ಸಂಹಿತೆ-1860, ಕಲಂ-354]

·         ಪ್ರತಿಯೊಬ್ಬ ಮಹಿಳೆಯು ಆಕೆಯ ಸಮ್ಮತಿ ಇಲ್ಲದೇ ಯಾರಾದರೂ ಲೈಂಗಿಕ ಸಂಭೋಗಕ್ಕಾಗಿ ಬಲವಂತಪಡಿಸಿದರೆ ಅವರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾಳೆ. [ಭಾರತೀಯ ದಂಡ ಸಂಹಿತೆ-1860, ಕಲಂ-376]

·         ಪ್ರತಿಯೊಬ್ಬ ಮಹಿಳೆಯು ಯಾರೊಬ್ಬರಿಂದ ಕಿರುಕುಳ ಅನುಭವಿಸುತ್ತಿದ್ದಲ್ಲಿ, ಅಥವಾ ಸಾರ್ವಜನಿಕ ಸ್ಥಳಗಳಾದ  ಬಸ್ಸು, ರೈಲು, ರಸ್ತೆ ಇನ್ನು ಮುಂತಾದ ಸ್ಥಳಗಳಲ್ಲಿ  ಚುಡಾಯಿಸಲ್ಪಟ್ಟಲ್ಲಿ, ಒರಟು ಟೀಕೆಗಳಿಗೆ ಒಳಪಟ್ಟಲ್ಲಿ  ಅಂತಹ ವ್ಯಕ್ತಿಯ ಮೇಲೆ ದೂರು ನೀಡುವ ಹಕ್ಕನ್ನು ಹೊಂದಿರುತ್ತಾಳೆ. [ಭಾರತೀಯ ದಂಡ ಸಂಹಿತೆ-1860, ಕಲಂ-354]

·         ಪತಿಯು ತನ್ನ ಪತ್ನಿಗೆ ಮಾನಸಿಕ ಅಥವಾ ದೈಹಿಕ ಹಿಂಸೆ ನೀಡಿದಲ್ಲಿ ಅಥವಾ ವರದಕ್ಷಿಣೆ ಹಣಕ್ಕಾಗಿ ಅಥವಾ ಮೌಲ್ಯಭರಿತ ವಸ್ತುಗಳಿಗಾಗಿ ಹಿಂಸೆ ನೀಡಿದ್ದಲ್ಲಿ ಅಂತಹ ಪತಿಯ ವಿರುದ್ದ ಮಹಿಳೆಯು ಸೂಕ್ತ ಕಾನೂನು ಕ್ರಮ ಜರುಗಿಸುವಲ್ಲಿ ದೂರು ನೀಡಬಹುದಾಗಿರುತ್ತದೆ.  [ಕಲಂ-498(ಎ) ಐಪಿಸಿ]

·         ಯಾವುದೇ ಮಹಿಳೆಗೆ ಆಕೆಯ ಗಂಡ , ಅತ್ತೆ ಅಥವಾ ಇತರೆ ಸಂಭಂದಿಕರುಗಳು ಆಕೆಗೆ ಹಣಕ್ಕಾಗಿ ಅಥವಾ ಮೌಲ್ಯಭರಿತ ವಸ್ತುಗಳಿಗಾಗಿ ಬೇಡಿಕೆ ಇಟ್ಟು ಆಕೆಗೆ ಹಿಂಸೆ ನೀಡುತ್ತಿದ್ದಲ್ಲಿ  ಅವರ ವಿರುದ್ದ  ದೂರನ್ನು ನೀಡುವ ಹಕ್ಕನ್ನು ಪ್ರತಿ ಮಹಿಳೆಯು ಹೊಂದಿರುತ್ತಾಳೆ. [ಭಾರತೀಯ ದಂಡ ಸಂಹಿತೆ-1860, ಕಲಂ-498(ಎ)]

·         ಮಹಿಳೆಯು ಒಂದು ವೇಳೆ ಅಪಹರಿಸಲ್ಪಟ್ಟಿದ್ದರೆ ಮತ್ತು ಅವಳ ಇಚ್ಛೆಗೆ ವಿರುದ್ಧವಾಗಿ ಯಾವುದೇ ವ್ಯಕ್ತಿಯನ್ನು ಮದುವೆಯಾಗಲು ಅಥವಾ ಲೈಂಗಿಕ ಸಂಭೋಗ ಹೊಂದಲು ಬಲವಂತಪಡಿಸಿ ಅಪರಾಧ ವೆಸಗಿದ್ದಲ್ಲಿ ಅಂತಹವರ ವಿರುದ್ದ ದೂರು ದಾಖಲಿಸುವ ಹಕ್ಕನ್ನು ಆ ಮಹಿಳೆಯು ಹೊಂದಿರುತ್ತಾಳೆ. [ಭಾರತೀಯ ದಂಡ ಸಂಹಿತೆ-1860, ಕಲಂ-366]

·         ಮಹಿಳೆಯೊಬ್ಬಳು ತಾನು ಸಾಕ್ಷಿದಾರಳಾಗಿದ್ದಲ್ಲಿ ತನ್ನ ಹತ್ತಿರದ ಸಂಬಂಧಿಕರ ಸಮಕ್ಷಮದಲ್ಲಿ  ತನ್ನ ಮನೆಯಲ್ಲೇ ವಿಚಾರಣಗೆ ಒಳಗಾಗುವ ಹಕ್ಕನ್ನು ಹೊಂದಿರುತ್ತಾಳೆ. [ದಂಡ ಪ್ರಕ್ರಿಯಾ ಸಂಹಿತೆ-1973,  ಕಲಂ-160]

·         ಮಹಿಳೆಯು ತನಗೆ ತೃಪ್ತಿಕರವೆನಿಸದಿದ್ದಲ್ಲಿ ಅಥವಾ ನಿಖರವಲ್ಲ ಎಂದೆನಿಸಿದ್ದಲ್ಲಿ ಅಂತಹ ಎಫ್ಐಆರ್ ಗೆ ಸಹಿ ಹಾಕಬಾರದು. [ರಾಷ್ಟ್ರೀಯ ಮಹಿಳಾ ಆಯೋಗ]

·         ಎಫ್ಐಆರ್ ನೊಂದಾಯಿಸಲು ಸಂಬಂಧಪಟ್ಟ ಅಧಿಕಾರಿಯು ಒಂದು ವೇಳೆ ನಿರಾಕರಿಸಿದಲ್ಲಿ, ದೂರಿನ ಪ್ರತಿಯನ್ನು ತಕ್ಷಣವೇ ಸಂಬಂಧಪಟ್ಟ ವಿಭಾಗದ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ರವರಿಗೆ ಕಳುಹಿಸಬೇಕು.

·         ಉಸ್ತುವಾರಿ ಅಧಿಕಾರಿಯು ಒಂದು ವೇಳೆ ದೂರಿನ ಸಂಬಂಧ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುವ ಹಕ್ಕನ್ನು ಪ್ರತಿ ಮಹಿಳೆಯು ಹೊಂದಿರುತ್ತಾಳೆ.

·         ಒಬ್ಬ ಮಹಿಳೆಯನ್ನು ಮತ್ತೊಬ್ಬ ಮಹಿಳೆ ಸಭ್ಯತೆಯಿಂದ ಮಾತ್ರ ತಪಾಸಣೆಗೆ ಒಳಪಡಿಸಬೇಕು . [ದಂಡ ಪ್ರಕ್ರಿಯಾ ಸಂಹಿತೆ-1973, ಕಲಂ-51 ಮತ್ತು 100]

·         ಯಾವುದೇ ಕೊಠಡಿಯು ಒಬ್ಬ ಸ್ತ್ರೀಯ ಅಧಿಬೋಗದಲ್ಲಿದ್ದು, ಅಂಥ ಯಾವುದೇ ಸ್ಥಳವು ರೂಢಗನುಸಾರವಾಗಿ ಬಹಿರಂಗವಾಗಿ ಕಾಣಿಸಿ ಕೊಳ್ಳದ ಮತ್ತು ಆ ಸ್ತ್ರೀಯು ದಸ್ತಗಿರಿಯಾಗಬೇಕಾದ ವ್ಯಕ್ತಿಯಲ್ಲದೆ ಇದ್ದಲ್ಲಿ ಅಂಥಹಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಯು ಪ್ರವೇಶಿಸುವ ಮುನ್ನ ಅಂಥಹಾ ಸ್ತ್ರೀಯು ಹೊರಗೆ ಹೋಗಲು ಸ್ವತಂತ್ರಳೆಂದು ಸೂಚಿಸಿ ಅವಳಿಗೆ ಹೊರ ಹೋಗಲು ಅನುವುಮಾಡಿಕೊಡತಕ್ಕದ್ದು ಹಾಗು ನಂತರ  ಆ ಕೊಠಡಿಯ ಒಳಗೆ ಪ್ರವೇಶಿಸಿ ಬಚ್ಚಿಟ್ಟುಕೊಂಡಿರುವ ವ್ಯಕ್ತಿಯನ್ನು ದಸ್ತಗಿರಿ ಮಾಡತಕ್ಕದ್ದು. (ಕಲಂ 47 ಸಿ.ಆರ್.ಪಿ.ಸಿ)

·         ಯಾವುದೇ ಗಂಡಸು ಅಥವಾ ಹೆಂಗಸಿನ ವಯಸ್ಸು 15 ವರ್ಷಕ್ಕಿಂತ ಕಡಿಮೆ ಇದ್ದಲ್ಲಿ  ಪೊಲೀಸ್ ಅಧಿಕಾರಿಯು ಪ್ರಕರಣದ ತನಿಖೆಗೆ ಸಂಬಂದಿಸಿದಂತೆ, ಆ ಗಂಡಸು ಅಥವಾ ಹೆಂಗಸು ವಾಸಮಾಡುತ್ತಿರುವ ಸ್ಥಳವಲ್ಲದ ಇತರೆ ಯಾವುದೇ ಸ್ಥಳದಲ್ಲಿ ಹಾಜರಾಗಿ ಸಾಕ್ಷಿದಾರರಾಗಲು ಅಗತ್ಯಪಡಿಸತಕ್ಕುದಲ್ಲ. 

ಇತ್ತೀಚಿನ ನವೀಕರಣ​ : 31-12-2019 05:11 PM ಅನುಮೋದಕರು: DSP


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರೈಲ್ವೇ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080